ಬೃಂದಾವನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. 2023ರ ಅಕ್ಟೋಬರ್ 23 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿತ್ತು . ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಕೆ.ಎಸ್ ರಾಮ್‌ಜಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. == ಕಥಾ ಹಂದರ == ಕಥೆಯು 36 ಸದಸ್ಯರ ವಿಶಾಲವಾದ ಅವಿಭಕ್ತ ಕುಟುಂಬದ ಸುತ್ತ ಸುತ್ತುತ್ತದೆ. ಕಥಾ ನಾಯಕ ಆಕಾಶ್ ತನ್ನ ವಿದ್ಯಾಭ್ಯಾಸ ಮುಗಿಸಿ ವಿದೇಶದಿಂದ ಹಿಂದಿರುಗುವ ಸಮಯವಾಗಿರುತ್ತದೆ. ಇತ್ತ ತನ್ನ ಅಂತಿಮ ಕ್ಷಣಗಳ ಅಂಚಿನಲ್ಲಿರುವ ಅಜ್ಜಿ ಸುಧಾಮೂರ್ತಿಗೆ ತನ್ನ ಮೊಮ್ಮಗ ಆಕಾಶ್ ನ ಮದುವೆ ನೋಡಬೇಕೆಂಬ ಆಸೆ ಇರುತ್ತದೆ. ಇನ್ನೊಂದೆಡೆ ಕಥಾ ನಾಯಕಿಯ ಅಣ್ಣ ಅಪ್ಪಣ್ಣ ತನ್ನ ಸಹೋದರಿ ಪುಷ್ಪಾಳನ್ನು ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಡಲು ಬಯಸುತ್ತಾನೆ. ಅದೇ ಸಮಯದಲ್ಲಿ ಆಕಾಶ್ ಮನೆಯಿಂದ ಪುಷ್ಪಾಳಿಗೆ ಸಂಬಂಧ ಬರುತ್ತದೆ. ಆದರೆ ಆಕಾಶ್ ಗೆ ಪುಷ್ಪ ಪೋಟೋ ಬದಲು ಬೇರೊಂದು ಪೋಟೋ ತಪ್ಪಾಗಿ ಕಳುಹಿಸಲಾಗಿರುತ್ತದೆ. ಈ ವಿಷಯ ಗೊತ್ತಿಲ್ಲದೆ ಆಕಾಶ್ ಮದುವೆಗೆ ಒಪ್ಪಿಗೆ ಸೂಚಿಸಿರುತ್ತಾನೆ. == ಪಾತ್ರವರ್ಗ == === ಮುಖ್ಯ ಪಾತ್ರಗಳು === ಅಮೂಲ್ಯ ಭಾರಾಧ್ವಾಜ್(2023-2024): ಪುಷ್ಪಾ ಪಾತ್ರದಲ್ಲಿ, ಕಥಾನಾಯಕಿಯಾಗಿ. ವರುಣ್ ಆರಾಧ್ಯ(2023-2024): ಆಕಾಶ್ ಪಾತ್ರದಲ್ಲಿ, ಕಥಾನಾಯಕನಾಗಿ. ವಿಶ್ವಾನಾಥ ರವೀಂದ್ರ(2023) : ಪಾತ್ರದಾರಿ ಬದಲಾವಣೆಯಾಗುವ ಮೊದಲು === ಇತರೆ ಪಾತ್ರಗಳು === ಚಿತ್ಕಲಾ ಬಿರಾದಾರ್(2023-2024): ಸುಧಾಮೂರ್ತಿ ಪಾತ್ರದಲ್ಲಿ, ಮನೆಯ ಯಜಮಾನಿಯಾಗಿ. ಆಕಾಶ್ ಅಜ್ಜಿಯಾಗಿ. ಸಂದೀಪ್ ಅಶೋಕ್(2023-2024) ಸುಂದರ್ ವೀಣಾ(2023-2024) ವೀಣಾ ಸುಂದರ್(2023-2024) ರಾಜೇಶ್ ಎಸ್.ರಾವ್(2023-2024) ಅನು ಪಲ್ಲವಿ ಗೌಡ ಮಾನಸ ಗುರುಸ್ವಾಮಿ ಯೋಗಿತಾ ಕುಂಬಾರ್ ವೈಷ್ಣವಿ ಗೌಡ ಮಧುರಾ ರಕ್ಷಿತಾ ರವೀಂದ್ರ: ರತ್ನ ಪಾತ್ರದಲ್ಲಿ. ರಾಘವೇಂದ್ರ ಅವರ ಹೆಂಡತಿಯಾಗಿ, ಸೀತಾ ತಾಯಿಯಾಗಿ ಸಾಗರ್ ಗೌಡ: ರಾಘವೇಂದ್ರ ಪಾತ್ರದಲ್ಲಿ, ರತ್ನ ಗಂಡನಾಗಿ ಮತ್ತು ಸೀತಾ ತಂದೆಯಾಗಿ. ಆರ್ವಿ ಎಮ್.: ಸೀತಾ ಪಾತ್ರದಲ್ಲಿ. ರಾಘವೇಂದ್ರ ಮತ್ತು ರತ್ನ ಮಗಳಾಗಿ. ಪ್ರಿಯಾ == ಬಾಹ್ಯಕೊಂಡಿಗಳು == ಬೃಂದಾವನ @ ಜಿಯೋಸಿನಿಮಾದಲ್ಲಿ ವೀಕ್ಷಣೆ ಮಾಡಿ == ಉಲ್ಲೇಖಗಳು ==